About

ABOUT US

ಮೈಸೂರು ಕೈಗಾರಿಕಾ ಸಂಘ

6500 ಎಕರೆ ವ್ಯಾಪ್ತಿಯ ಒಂದೇ ತೆಕ್ಕೆಯಲ್ಲಿ ಬರುವ ಆಗ್ನೇಯ ಏಷ್ಯಾ ಖಂಡದ ಅತಿ ದೊಡ್ಡ ಕೈಗಾರಿಕಾ ಪ್ರದೇಶ ಹೆಬ್ಬಾಳು ಕೈಗಾರಿಕಾ ಪ್ರದೇಶ.
ಮೇಟಗಳ್ಳಿ, ಬೆಳಗುಳ, ಹೆಬ್ಬಾಳ, ಹೂಟಗಳ್ಳಿ , ಬೆಳವಾಡಿ , ಕೂರ್ಗಳ್ಳಿ, ಪುರ ಅನಗನ ಹಳ್ಳಿ , ಸಪ್ತ ಹಳ್ಳಿಗಳ ಕೈಗಾರಿಕಾ ಪ್ರದೇಶಗಳ ಬೆಸುಗೆ
ಹೆಬ್ಬಾಳು ಕೈಗಾರಿಕಾ ಪ್ರದೇಶ.
ತವರು ಜಿಲ್ಲೆ ಮೈಸೂರಿಗೆ ಪ್ರಾತಃ ಸ್ಮರಣೀಯ ಮುಖ್ಯಮಂತ್ರಿ ಶ್ರೀ ಡಿ ದೇವರಾಜ್ ಅರಸ್ ರವರ ಕೊಡುಗೆ ಹೆಬ್ಬಾಳು ಕೈಗಾರಿಕಾ ಪ್ರದೇಶ.
ಒಂದು ಲಕ್ಷ ಕಾರ್ಮಿಕರು ಬದುಕು ಕಟ್ಟಿಕೊಂಡಿರುವ ವಿವಿಧ ದೇಶ ,ರಾಜ್ಯದ ಪ್ರಜೆಗಳು ಇಲ್ಲಿನ ಸ್ಥಳೀಯ ನಿವಾಸಿಗಳಾಗಿ ನಮ್ಮವರಾಗಿ ಬಾಳುತ್ತಿರವ ಶಾಂತಿಯ ಕೈಗಾರಿಕಾ ತೋಟ ಹೆಬ್ಬಾಳು ಕೈಗಾರಿಕಾ ಪ್ರದೇಶ.

ಟಿಶ್ಯೂ ಪೇಪರ್ ನಿಂದ ನೋಟ್ ಪ್ರಿಂಟಿಂಗ್ ಪೇಪರ್ ಮತ್ತು ಕರೆನ್ಸಿ ನೋಟ್ ವರೆಗೆ .ಡೇಟಾಲ್ , ಸ್ಯಾನಿಟೈಸರ್ ನಿಂದ ಕುಡಿಯುವ ನೀರು , ತಂಪು ಪಾನೀಯ ದವರೆಗೆ .

ಹೆಲ್ತ್ ಕೇರ್, ಪ್ಲಾಸ್ಟಿಕ್, ಪ್ಯಾಕೇಜಿಂಗ್, ಆಹಾರ ಉತ್ಪನ್ನ, ಕಟ್ಟಡ ಸಾಮಗ್ರಿ , ಕೆಮಿಕಲ್, ಫರ್ಟಿಲೈಜರ್, ಆಟೋಮೊಬೈಲ್ , ಗಂಧದ ಕಡ್ಡಿ , ಹ್ಯಾಂಡಿ ಕ್ರಾಫ್ಟ್ , ಎಲೆಕ್ಟ್ರಾನಿಕ್ಸ್, ಸಾಫ್ಟ್ ವೇರ್ , ಮಾಹಿತಿ ತಂತ್ರ ಜ್ಞಾನ , ಜೈವಿಕ ತಂತ್ರಜ್ಞಾನದ ಉತ್ಪನ್ನಗಳು.ಸಿದ್ದ ಉಡುಪು , ಜವಳಿ ,ಇಂಜೀನಿಯ ರಿಂಗ್ ಇತ್ಯಾದಿ 2500 ಕ್ಕೂ ಹೆಚ್ಚು ವಿವಿಧ ಕೈಗಾರಿಕಾ ಉತ್ಪನ್ನಗಳನ್ನು 2000 ಕ್ಕೂ ಹೆಚ್ಚು ಕೈಗಾರಿಕೆಗಳು ತಯಾರಿಸಿ ವಿವಿಧ ರಾಜ್ಯ, ದೇಶಗಳಿಗೆ ಸರಬರಾಜು ಮಾಡುತ್ತಿರುವ ದಕ್ಷಿಣ ಭಾರತದ ಏಕೈಕ ಕೈಗಾರಿಕಾ ಪ್ರದೇಶ ಹೆಬ್ಬಾಳು ಕೈಗಾರಿಕಾ ಪ್ರದೇಶ.

Drop us a line

For any kind of query, contact us with the details below.

Subscribe your E-mail for our Newsletter & Business Tips